Madhu YN

ಹಲೋ,

ನಾನು ಮಧು ವೈ ಎನ್‌ ಅಂತ. ಸಾಫ್ಟ್‌ವೇರ್ ಎಂಜಿನೀರ್‌ ಮತ್ತು ಹವ್ಯಾಸಿ ಬರಹಗಾರ. ಸಾಫ್ಟವೇರ್‌ ಎಂಜಿನೀರ್ ಅಂದ ತಕ್ಷಣ ಬಿಸ್ಲೇರಿ ಬಾಟ್ಲಿ ಹಿಡುಕೊಂಡು ತಿರುಗಾಡೊ‌ ಟೆಕಿ ಅಲ್ಲ. ಬರಹಗಾರ ಅಂದ ತಕ್ಷಣ ಜುಬ್ಬ ಜೋಳಿಗೆ ಸಂಗಮವಲ್ಲ. ಸಿಗ್ನಲ್ನಲ್ಲಿ ನಿನ್‌ ಅಸ್ದಲಜಕಞಷವಚನಟೊರೆಇಡ ಎಂದು ಬಾಯಿ ಹೊಲಸು ಮಾಡಿಕೊಳ್ಳಬಲ್ಲ ಸ್ಟ್ರೀಟ್‌ ಬಾಯ್.‌ ಏನೂ ಗೊತ್ತೇ ಇಲ್ವೆನೊ ಅನ್ನೊಂಗೆ ಫುಲ್‌ ಫಾರ್ಮಲ್ಸಲ್ಲಿ ಟೈ ಕಟ್ಟಿ ನಿಲ್ಲೊ ಸ್ಮಾರ್ಟ್‌ ಬಾಯ್.‌ ಆಕ್ಚುವಲಿ ಬಾಯ್‌ ಅಲ್ಲ, ತಲೆ ನೆರೆತಿದೆ. ಈ ವೆಬ್ಸೈಟು ನನ್ನ ಪುಟ್ಟ ಸ್ವಂತದ ಡಿಜಿಟಲ್‌ ಮನೆ. ಇಲ್ಲಿ ನನ್ನ ಪುಸ್ತಕಗಳ ಪರಿಚಯ, ಬಂದ ಪ್ರತಿಕ್ರಿಯೆಗಳು, ನಾ ಬರೆದ ಲೇಖನಗಳು, ಪುಸ್ತಕ ಕೊಳ್ಳುವ ಲಿಂಕುಗಳು ಮುಂತಾದ ಮಾಹಿತಿ ಸಿಗುತ್ತದೆ. ಒಂಚೂರು ಜಾಗವನ್ನು ಹರಟೆ ಕೊಚ್ಚಲು ಮೀಸಲಿಟ್ಟಿದೇನೆ. ಖಾಸಗಿ ವೆಬ್ಸೈಟುಗಳ ಮಜವೇ ಅದು, ನಮಗೆಂಗ್‌ ಬೇಕೊ ಅಂಗೆ ಜೋಡಿಸ್ಕೊಬೊದು, ಎಂಗ್‌ ಬೇಕೊ ಅಂಗೆ ಆಟಾಡ್ಕೊಬೊದು. ಇದೆಲ್ಲ ನಿಮಗೆ ಯಾಕೆ ಬೇಕೊ ಎಷ್ಟು ಮುಖ್ಯವೊ ಗೊತ್ತಿಲ್ಲ- ಹುಟ್ಟೂರು ತುಮಕೂರು ಜಿಲ್ಲೆ ಸಿರಾ ತಾಲೂಕು ಯರಗುಂಟೆ ಗ್ರಾಮ. ಓದಿದ್ದು ತುಮ್ಕೂರು ನವೋದಯ, ಬೆಂಗಳೂರು GAT, ಸದ್ಯಕ್ಕೆ ಐಬಿಎಂನಲ್ಲಿ ಕೆಲಸ.

ಸೋಶಿಯಲ್‌ ಮಿಡಿಯಾದಲ್ಲಿ ಇಲ್ಲಿ ಆಕ್ಟಿವ್‌ ಇರ್ತೇನೆ-
ಫೇಸ್‌ ಬುಕ್‌ ಪ್ರೊಫೈಲ್ (ಇಲ್ಲೇ ಹೆಚ್ಚು) |‌ ಫೇಸ್‌ ಬುಕ್‌ ಪುಟ | ಇನ್ಸ್ಟಾಗ್ರಾಮ್ | ಕ್ಲಬ್‌ ಹೌಸ್ ‌ | ಟ್ವಿಟರ್

ಇಲ್ಲಿಗೆ ಈಮೇಲ್‌ ಕಳಿಸಬಹುದು- madhusudanayn@gmail.com

ಮಾಧ್ಯಮದಲ್ಲಿ ನಾವು:
ಬುಕ್‌ ಬ್ರಹ್ಮ
ಅವಧಿ, ಫೀಫೋ
ಒನ್‌ ಇಂಡಿಯ
ಜನಮಿತ್ರ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ