ಚಾಟ್ ಜಿಪಿಟಿ ಸಧ್ಯಕ್ಕೆ ಚಟಪಟ ಅರಳು ಹುರಿದಂತೆ ಮಾತಾಡುವ ಆರೇಳು ವರುಷದ ಮಗುವಿನಂತಿದೆ. ಮಗು ದೊಡ್ಡವರ ಬಾಯಿ ನೋಡುತ್ತ ಅವರನ್ನು ಆಲಿಸುತ್ತ ಭಾಷೆ ಕಲಿಯುತ್ತದೆ. ಆದರೆ ಬಹುತೇಕ ಅದಕ್ಕೆ ತಾನೇನು ಮಾತಾಡ್ತಿದೇನೆ ಎಂಬ ಅರಿವು ಇರುವುದಿಲ್ಲ. ಅಂದರೆ ಅದಕ್ಕೆ ತಂತಾನೆ ಸಮಸ್ಯೆ ಬಿಡಿಸುವ ಬಗೆಹರಿಸುವ ಚಾಕಚಕ್ಯತೆ ಇರುವುದಿಲ್ಲ. ಸ್ವಲ್ಪ ಇರುತ್ತದೆ, ಮಕ್ಕಳಷ್ಟು. ಆದರೆ ದೊಡ್ಡವರಾಗ್ತಾ ಕಲಿತಂತೆ  ಕ್ರಮೇಣ ಕಲಿಯುತ್ತದೆ. 

ಎಂಜಿನಿಯರ್ ಗಳ ಇಂಟರ್ ವ್ಯೂ ಮಾಡುವಾಗ ಸಹ ಈ ಪರೀಕ್ಷೆ ಮಾಡುತ್ತೇವೆ. ಅನೇಕರು ಥಿಯರೆಟಿಕಲ್ ಪ್ರಶ್ನೆಗಳಿಗೆ ಚಟಪಟಾಂತ ಉತ್ತರಿಸುತ್ತಾರೆ. ಯಾಕಂದರೆ ಪಠ್ಯ ಪುಸ್ತಕವನ್ನು ಸಕತ್ತಾಗಿ ಓದಿಕೊಂಡು ಬಂದಿರುತ್ತಾರೆ. ಆದರೆ ಕೂತಲ್ಲೇ ಒಂದು ಬುದ್ಧಿ-ಕ್ಷಮತೆ ಪರೀಕ್ಷಿಸುವ ಸಮಸ್ಯೆ (ಗಣಿತ ಆಗಿರಬಹುದು, ಒಗಟಾಗಿರಬಹುದು, ಆಪ್ಟಿಟ್ಯೂಡ್ ಪ್ರಶ‌್ನೆಯಾಗಿರಬಹುದು) ಎದುರಿಟ್ಟರೆ ತಿಣುಕುತ್ತಾರೆ. ಕೆಲವರ ಸಮಯ ತಗೊಂಡು ನಿಧಾನಕ್ಕೆ ಕೊಟ್ಟ ಪ್ರಾಬ್ಲಂ ಅನ್ನು ಸಣ್ಣ ಸಣ್ಣ ಉಪ ಸಮಸ್ಯೆಗಳನ್ನಾಗಿ ಬಿಡಿಸಿ ರ‍್ಥ ಮಾಡಿಕೊಂಡು ತಮಗೇ ಆಶ‌್ರ‍್ಯವಾಗುವಂತೆ ಉತ್ತರವನ್ನೂ ಸಹ ಕಂಡುಹಿಡಿಯುತ್ತಾರೆ. ಸಂರ‍್ಶನದ ಉದ್ದೇಶ ಅದೇ ಆಗಿರುತ್ತದೆ. ಅಂದರೆ ಎದುರಿಗಿರುವವನನ್ನು ಕ್ಲಿಷ್ಟ ಪ್ರಶ‌್ನೆಯಿಂದ ಸೋಲಿಸಿ ನಿರುತ್ತರನ್ನಾಗಿಸಿದರೆ ಏನೂ ಸಿಗಲ್ಲ.  

ಈ ರ‍್ಥದಲ್ಲಿ ಚಾಟ್ ಜಿಪಿಟಿ ಸಹ ಸದ್ಯಕ್ಕೆ ಬಾಲ್ಯಾವಸ್ಥೆಯಲ್ಲಿದೆ. ತಾನು ಕಲಿತಿರುವಷ್ಟು ತರಬೇತಿ ಸಿಕ್ಕಿರುವಷ್ಟು ಮಾಹಿತಿಯಿಂದ ಉತ್ತರಿಸುತ್ತಿದೆ. ಮನುಷ್ಯನಿಗೆ ಅತ್ಯಂತ ಸರಳ ಮತ್ತು ನೇರ ಅನಿಸುವಂತಹ ಸಾಮಾನ್ಯ ಪ್ರಶ‌್ನೆ ಸಹ ಅದಕ್ಕೆ ರ‍್ಥವಾಗಲ್ಲ, ಉತ್ತರಿಸಲಾಗಲ್ಲ. ಆದರೆ ಮನುಷ್ಯನಿಗೆ ತಕ್ಷಣಕ್ಕೆ ಹೊಳೆಯದ ತಿಣುಕಬೇಕಾದಂತಹ ಸಮಸ್ಯೆಗಳಿಗೆ ಠಕ್ಕಂತ ಉತ್ತರಿಸುತ್ತದೆ. ಇದೆಲ್ಲ ತನಗೆ ಫೀಡ್ ಆಗಿರುವ ಮಾಹಿತಿ ಮೇರೆಗೆ ಮಾಡುತ್ತಿದೆ ಎಂದು ನನ್ನ ಊಹೆ.  ಇದು ಇಂರ‍್ನೆಟ್ಟಿನಿಂದ ಮಾಹಿತಿ ಹೆಕ್ಕಿ ಉತ್ತರಿಸುತ್ತಿಲ್ಲವಾದರೂ ಇದಕ್ಕೆ ಇಂರ‍್ನೆಟ್ಟಿನ ಬಹುತೇಕ ಮಾಹಿತಿಯನ್ನು ಫೀಡ್ ಮಾಡಲಾಗಿದೆ ಎಂದು ಊಹಿಸಬಹುದು. ಒಂದು ವೇಳೆ ಇಂರ‍್ನೆಟ್ಟಿಗೆ ಕನೆಕ್ಟ್ ಮಾಡಿದರೆ ಇದರ ಕ್ಷಮತೆ ಇನ್ನಷ್ಟು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಅದಕ್ಕೆ ತುಂಬಾಂದರೆ ತುಂಬಾ ಕಂಪ್ಯೂಟಿಂಗ್ ಪವರ್ ಬೇಕು. ಇನ್ವೆಸ್ಟ್ ಮೆಂಟ್ ಬಂದಂಗೆಲ್ಲ ಅದನ್ನು ಮಾಡ್ತಾರೆ ಅನಿಸುತ್ತದೆ. 

ಇದರಿಂದ ಉದ್ಯೋಗ ನಷ್ಟ ಆಗ್ತದೆ ಅನ್ನೋದು ಸುಳ್ಳು. ಹಾಗೆ ನೋಡಿದರೆ ಮನುಷ್ಯ ಇನ್ನಷ್ಟು ಬೌದ್ಧಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ. ನಾವಿನ್ನೂ ಬಹಳಷ್ಟರ ಮಟ್ಟಿಗೆ ನಿರ‍್ಥಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇವೆ. ಎಟಿಎಂ ನಲ್ಲಿ ವೃಥಾ ಒಬ್ಬ ಸೆಕ್ಯುರಿಟಿಯನ್ನು ಕೂರಿಸಿದ್ದೇವೆ. ಹೊಟೆಲಿನ/ರೈಲ್ವೇ ಸ್ಟೇಶನ್ನಿನ ಹೆಲ್ಪ್ ಡೆಸ್ಕ್ ಹುಡುಗಿ ಬೆಳಗಿಂದ ಸಂಜೆ ತನಕ ಬಂದೋರಿಗೆಲ್ಲ ಅದೇ ಅದೇ ಉತ್ತರ ಕೊಟ್ಟು ಕೊಟ್ಟು ಸಾಕಾಗಿರುತ್ತದೆ. ಅವರೆಲ್ಲ ಬಿಡಿ ಖುದ್ದು ಸಾಫ‌್ಟವೇರು ಎಂಜಿನೀರುಗಳು ನೂರಕ್ಕೆ ಎಂಭತ್ತರಷ್ಟು ಇಂತಹ ಸೆಕ್ಯುರಿಟಿ-ಹೆಲ್ಪ್ ಡೆಸ್ಕ್ ಸಮಾನ ಕೆಲಸವನ್ನೆ ಮಾಡುವುದು. ಮಾನ್ಯುವಲ್ ಲೇಬರ್, ಕೂಲಿ ಕೆಲಸ ಅಂತೀವಲ್ಲ ಅದು. ಈ ನಿಟ್ಟಿನಲ್ಲಿ ರ‍್ಟಿಫಿಶಿಯಲ್ ಇಂಟಲಿಜೆನ್ಸ್ ಮನುಷ್ಯನನ್ನು ಕೂಲಿ ಕೆಲಸಗಳಿಂದ ಬಿಡಿಸಿ ರ‍್ಥಪರ‍್ಣ ಮಹತ್ವದ ಕರ‍್ಯಗಳಲ್ಲಿ ತೊಡಗಿಸಿಕೊಳ್ಳಲು ಸಹಾಯ ಮಾಡಬಹುದು. ಜನರಿಲ್ಲದೆ, ಹಣದ ಹೂಡಿಕೆಯಿಲ್ಲದೆ ಇತಿಹಾಸವನ್ನು ಬಗೆಯುವ ನಮ್ಮ ರ‍್ಕಿಯೋಲಜಿಸ್ಟುಗಳು ಖಾಲಿ ಕೂತಿದ್ದಾರೆ, ಭವಿಷ್ಯಕ್ಕಾಗಿ ದುಡಿಯುವ ವಿಜ್ಞಾನಿಗಳು ಮುಖ್ಯಾತಿಮುಖ್ಯ ಕೆಲಸಗಳಲ್ಲಿ ಮಾತ್ರ ಕೈಹಾಕಿದ್ದಾರೆ. 
ಚಾಟ್ ಜಿಪಿಟಿ ಸೃಜನಶೀಲ ಕೆಲಸಗಳಿಗೂ ಕೈಹಾಕಬಹುದೇ ಎಂದರೆ ಹೌದು. ಮತ್ತು ಮನುಷ್ಯನಿಗಿಂತ ಹೆಚ್ಚು ಗುಣಮಟ್ಟದ ಕಲೆ ಸೃಷ್ಟಿಸಬಹುದೇ ಎಂದರೆ ಅದೂ ಹೌದು. ಮಾನವನ ಮೆದುಳು ಎಷ್ಟು ಶಕ್ತಿಯುತವೋ ಅಷ್ಟೇ ಮಿತಿಯುಕ್ತ ಸಹ. ಅವನ ಅನುಭವ ಪರಿಧಿ, ಜ್ಞಾನ ವೈಶಾಲ್ಯ ತುಂಬಾ ಚಿಕ್ಕದು. ಮತ್ತು ತನ್ನ ಹುಟ್ಟು ಬೆಳೆದ ಪರಿಸರದ ಮೇರೆಗೆ ಪರ‍್ವಾಗ್ರಹ ಪೀಡಿತನಾಗಿರುತ್ತನಾದ್ದರಿಂದ ಆತ ಸೃಷ್ಟಿಸುವ ರ‍್ಥಗಳು ಸಹ ಸೀಮಿತ. ಚಾಟ್ ಜಿಪಿಟಿ ನರ‍್ಜೀವ ನರ‍್ಭಾವುಕವೇ ಆದರೂ ಅದಕ್ಕಿರುವ ಭಾಷಾ ಸಾರ‍್ಥ್ಯ ಮನುಷ್ಯನಿಗೆ ಚಾಲೆಂಜ್ ಮಾಡಲಿದೆ. ಭಾಷೆಗಳ ರ‍್ಮುಟೇಶನ್ ಗಳಿಂದಲೇ ಅದು ಹೊಮ್ಮಿಸುವ ರ‍್ಥ ಸಾಧ್ಯತೆ ಅಗಾಧವಾದ್ದುದಾಗಿದೆ. 
ಖಂಡಿತ ಅದು ಮನುಷ್ಯನಿಗಿಂತ ಉತ್ತಮ ಪದ್ಯ ಬರೆಯಲಾಗದು. ಆದರೆ ಮನುಷ್ಯನಿಗಿಂತ ಉತ್ತಮ ಗದ್ಯ ಬರೆಯಬಹುದು ಎಂದು ಅನಿಸುತ್ತದೆ. 

ಅದರ ಚಾಲೆಂಜ್ ಗೆ ಎದುರಾಗಿ ಆಲ್ಮೋಸ್ಟ್ ಕಳೆದೇ ಹೋಗಿರುವ ಒರಿಜಿನಲ್ ಥಿಂಕಿಂಗ್ ಗೆ ಪ್ರಾಮುಖ್ಯತೆ ಮರಳಬಹುದು. ಇಂದು ಸೃಷ್ಟಿಯಾಗುತ್ತಿರುವ ಗದ್ಯ ಬಹುಪ್ರಮಾಣದಲ್ಲಿ ಒಂದಲ್ಲಾ ಒಂದು ರೀತಿಯ ಕಾಪಿಯಿಂಗ್. ಎಟಿಎಂ ಸೆಕ್ಯುರಿಟಿಯಷ್ಟೇ ನಿರ‍್ಥಕ ಕೆಲಸ. ದೃಶ‌್ಯಮಾದ್ಯಮದ ಕಂಟೆಂಟ್ ಸಹ ಹೀಗೆಯೇ ಇದೆ. ಹಾಗಾಗಿಯೆ ದಿನನಿತ್ಯ ದಂಡಿದಂಡಿಯಾಗಿ ವಿಡಿಯೊ ಕಂಟೆಂಟ್ ಸೃಷ್ಟಿಯಾಗುತ್ತಿದೆ. ನಾವು ರ‍್ಥಿಕವಾಗಿಯಲ್ಲದಿದ್ದರೂ ಬೌದ್ಧಿಕವಾಗಿ ಖಂಡಿತ ನಿರುದ್ಯೋಗಿಗಳಾಗಿದ್ದೇವೆ. 

ಚಾಟ್ ಜಿಪಿಟಿಯಿಂದ ಅಪಾಯಗಳಿವೆಯೇ ಎಂದರೆ- ಯಾರ ಕೈಗೆ ಸಿಕ್ಕರೆ ಎಂಬುದರ ಮೇಲೆ ನರ‍್ಧಾರವಾಗುತ್ತದೆ. ಗೂಗಲ್ ವಾಟ್ಸಾಪ್ ಮೂಲತಃ ಉಪಯೋಗಕಾರಿ ಸಾಫ್ಟವೇರುಗಳು. ಆದರೆ ಅವು ಆನಂತರದ ದಿನಗಳಲ್ಲಿ ಬಳಕೆಯಾದುದು ದುಷ್ಟ ಕೆಲಸಗಳಿಗೆ. ಹಾಗೆಯೆ ಇದೂ ಸಹ. ಗ್ಲೋಬಲ್ ವರ‍್ಮಿಂಗ್ ತಗ್ಗಿಸಲಿಕ್ಕೆ ನ್ಯೂಕ್ಲಿಯರ್ ಬಾಂಬ್ ಬಳಸದಿರೋದಕ್ಕೆ ಎಲ್ಲಾ ದೇಶಗಳು ಸೇರಿ ಸರ‍್ವತ್ರಿಕ ನಿಯಮ/ನರ‍್ಬಂಧಗಳನ್ನು ಹಾಕಿಕೊಂಡಿರುವಂತೆ ಸಾಫ್ಟವೇರ್/ಮಶೀನುಗಳಿಗೂ ಸಹ ನಿಯಮ/ನರ‍್ಬಂಧಗಳನ್ನು ಹಾಕಿಕೊಳ್ಳಬೇಕಾದ ಸಮಯ ಬಂದಿದೆ. ಈಗಾಗಲೇ ಇರಬೇಕಿತ್ತು, ತಡವಾಗಿದೆ.